ರೋಮಾನ್ಸ್ ಭಾಷೆಗಳು -
ಇಂಡೊಯುರೋಪಿಯನ್ ಭಾಷಾಪರಿ ವಾರಕ್ಕೆ ಸೇರಿರುವ ಒಂದು ಪ್ರಮುಖ ಭಾಷಾಗುಂಪು. ಇದಕ್ಕೆ ಇಟಾಲಿಯನ್, ಕ್ಯಾಟಲನ್, ಪೋರ್ಚುಗೀಸ್, ಪ್ರಾವೆನ್ಸಲ್ (ಪ್ರಾವೆಂಕಲ್), ಫ್ರೆಂಚ್, ರೋಮಾನಿಯನ್, ರೀಟೊರೋಮಾನಿಕ್, ಲ್ಯಾಡಿನೊ, ಸಾರ್ಡಿನಿಯನ್,  ಸ್ಪ್ಯಾನಿಷ್ ಮುಂತಾದ ಭಾಷೆಗಳು ಸೇರಿವೆ. ಇವು 800ರ ತರುವಾಯ ಲ್ಯಾಟಿನ್ ಭಾಷೆಯಿಂದ ನೇರವಾಗಿ ಉಗಮಿಸಿ ವಿಕಾಸ ಪಡೆದಂಥವು. ರೋಮನರು ಜಯಗಳಿಸಿದ ದೇಶಗಳಲ್ಲೆಲ್ಲ ಲ್ಯಾಟಿನ್ ಭಾಷೆಯ ಆಧಿಪತ್ಯ ತಂದಾಗ ಈ ಭಾಷೆಗಳು ಜನ್ಮ ತಳೆದು ಅಭಿವೃದ್ಧಿ ಹೊಂದಿದುವು. ಆದ್ದರಿಂದ ಇವುಗಳ ಪದಕೋಶಗಳು ಲ್ಯಾಟಿನ್ ಭಾಷೆಯಿಂದಲೇ ನಿಷ್ಪನ್ನವಾಗಿವೆ. ಈ ಭಾಷೆಗಳು ಯುರೋಪಿ ನಾದ್ಯಂತ ಬಳಕೆಯಲ್ಲಿವೆ. ಈ ಪೈಕಿ ಕೆಲವು ರಾಷ್ಟ್ರಭಾಷೆಗಳಾಗಿವೆ. ಇಟಲಿ, ಪೋರ್ಚುಗಲ್, ಫ್ರಾನ್ಸ್, ಸ್ಪೇನ್ ರಾಷ್ಟಗಳ ರಾಷ್ಟ್ರಭಾಷೆಗಳು ಅನುಕ್ರಮವಾಗಿ ಇಟಾಲಿಯನ್, ಪೋರ್ಚುಗೀಸ್, ಫ್ರೆಂಚ್ ಮತ್ತು ಸ್ಪ್ಯಾನಿಷ್.

ಈ ಭಾಷಾಗುಂಪಿನ ಅನೇಕ ಭಾಷೆಗಳಲ್ಲಿ ಎರಡು ಬಗೆಯ ಲಿಂಗವ್ಯ ವಸ್ಥೆ ಮತ್ತು ಎರಡು ಬಗೆಯ ವಚನವ್ಯವಸ್ಥೆ ಇದೆ. ಸರ್ವನಾಮಗಳಲ್ಲಿ ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮಪುರುಷ ಎಂಬ ಮೂರು ರೂಪಗಳು ಇವೆ. ಕ್ರಿಯಾಪದಗಳಲ್ಲಿ ವರ್ತಮಾನ, ಭೂತ, ಭವಿಷ್ಯತ್, ಅಪೂರ್ಣ, ಪುರುಷವಾಚಕ ಪೂರ್ವಕಾಲಿಕ, ಮಿಶ್ರ, ಆಜ್ಞಾರ್ಥಕ, ಆತ್ಮಾರ್ಥಕ ಎಂಬ ರೂಪಗಳಿವೆ. ಕೆಲವು ಭಾಷೆಗಳಲ್ಲಿ ಸಂಭಾವನಾತ್ಮಕ ಕ್ರಿಯಾರ್ಥಕದಲ್ಲಿ ಆರು ರೂಪಗಳುಂಟು. ಭೂತಕಾಲಿಕ ಕೃದಂತದ ಜೊತೆಗೆ ಸೆರ್ ಎಂಬ ಕ್ರಿಯಾಪದ ಜೊತೆಗೂಡಿದಾಗ ಕರ್ಮಣಿ ರೂಪ ಉಂಟಾಗುತ್ತದೆ. ಧಾತು ರೂಪದೊಡನೆ ಒಂದು ಅಥವಾ ಎರಡು ಸರ್ವನಾಮ ರೂಪಗಳನ್ನು ಸಂಯುಕ್ತವಾಗಿ ಬಳಸಬಹು ದಾದ ಸಾಧ್ಯತೆ ಇದೆ. ವಾಕ್ಯ ರಚನೆಗಳಲ್ಲಿ ಕರ್ತೃಪದ ಕೆಲವೊಮ್ಮೆ ಗೌಣವಾಗಿರುತ್ತದೆ. ಇದು ಕಾರ್ಯಪ್ರವೃತ್ತನಾಗುವ ವ್ಯಕ್ತಿಯ ಸ್ಥಿತಿಯನ್ನು ಸೂಚಿಸುತ್ತದೆ. 

ಈ ಭಾಷಾಗುಂಪಿನಲ್ಲಿ ಲಿಖಿತ ಭಾಷೆಗಳ ಸಂಖ್ಯೆಯೇ ಹೆಚ್ಚು. ದೇಶದ ಶೈಕ್ಷಣಿಕ, ಆಡಳಿತ ಕ್ಷೇತ್ರಗಳಲ್ಲಿ ಇವು ಪ್ರಧಾನ ಪಾತ್ರ ವಹಿಸಿವೆ. ಆದ್ದರಿಂದ ಈ ಭಾಷಾಗುಂಪಿನ ಯಾವುದೇ ಲಿಖಿತ ಭಾಷೆ ಯನ್ನು ಕಲಿಯಲು ಇಚ್ಛಿಸಿದವರಿಗೆ ಬರ್ಲಿಟ್ಜ್ ಭಾಷಾಶಾಲೆಯ ನುರಿತ ಅಧ್ಯಾಪಕರು ಕಲಿಸಿಕೊಡುತ್ತಾರೆ.	
(ವೈ.ಎಮ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ